Close

ಶ್ರೀ ಕ್ಷೇತ್ರ ಕನಕಗಿರಿ

ವರ್ಗ ಧಾರ್ಮಿಕ

ಕನಕಗಿರಿ ಬೆಟ್ಟವು ನಾಕೋಪಮಾನ ಶೈಲಿ ಅಂದರೆ ಸ್ವರ್ಗದಂತಿರುವ ಶಿಖರವೆಂದೇ ಗ್ರಂಥಕಾರರು ಬಣ್ಣಿಸಿದ್ದಾರೆ. ಕನಕಗಿರಿ ಶ್ರೀ ಕ್ಷೇತ್ರವು ಪ್ರಸಿದ್ದ ಜೈನ ಕೇಂದ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಸಮೀಪ ಕನಕಗಿರಿಯಲ್ಲಿ ಶ್ರೀಗಂಧ ಚಂದನ ವೃಕ್ಷಗಳಿದ್ದುದರಿಂದ ಮಲೆಯಗಿರಿ ಎಂದು ಹಾಗೂ ಪೂಜ್ಯಪಾದರ ಅಳಿಯ ನಾಗವರ್ಮನು ತನಗೆ ತಿಳಿದಿದ್ದ ರಹಸ್ಯವಿದ್ಯೆಯಿಂದ ಇಡೀ ಬೆಟ್ಟವನ್ನು ಚಿನ್ನದ ಬೆಟ್ಟವನ್ನಾಗಿ ಪರಿವರ್ತಿಸಲು ಹೊರಟಿದ್ದನೆಂದು ಐತಿಹ್ಯವಿದ್ದು ಇದರಿಂದ ಕನಕಗಿರಿ ಎಂದು ಪ್ರಸಿದ್ದಿಯಾಗಿದೆ. ಇಂದಿಗೂ ಈ ಪರ್ವತ ಶೈಲದಲ್ಲಿ ವಿಶಾಲ ಬಂಡೆಗಳ ಮೇಲೆ ಶಾಶ್ವತವಾಗಿ ಕೆತ್ತಿರುವ ಪ್ರಾಚೀನ ಚರಣಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ, ಗುಹೆ ಮುಂತಾದ ಐತಿಹ್ಯಗಳು ಶ್ರದ್ಧಾ ಕೇಂದ್ರಗಳಾಗಿವೆ. ಈ ಕ್ಷೇತ್ರವು ಚಾಮರಾಜನಗರದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ.