ಜೋಡಿಗೆರೆ – ಕರ್ನಾಟಕದ ಜುರಾಸಿಕ್ ಪಾರ್ಕ್
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
- ಜೋಡಿಗೆರೆಯ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಅಸದಳ. ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಪ್ರದೇಶ, ಮನಬಿಚ್ಚಿ ಓಡಾಡುವ ವನ್ಯಜೀವಿಗಳು, ಸುಯ್ದಾಡುವ ತಂಗಾಳಿ, ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ.
- ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವ ಅಪರೂಪದ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 1600 ಮೀಟರ್ ಗಳಷ್ಟು ಎತ್ತರದಲ್ಲಿದೆ.