ರಸ್ತೆಯ ಮೂಲಕ
ಚಾಮರಾಜನಗರವು ಮೈಸೂರು, ಬೆಂಗಳೂರಿಗೆ ಉತ್ತಮ ಸಂಪರ್ಕ ಹೊಂದಿದೆ. ಇದು ಬೆಂಗಳೂರಿನಿಂದ ಸುಮಾರು 180 ಕಿಲೋಮೀಟರ್ ಮತ್ತು ಮೈಸೂರಿನಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ನಗರಗಳಿಗೆ/ಪಟ್ಟಣಗಳಿಗೆ ಚಾಮರಾಜನಗರದಿಂದ ಬಹಳಷ್ಟು ಸರ್ಕಾರಿ ಬಸ್ಸುಗಳು ಇರುತ್ತವೆ.
ರೈಲಿನ ಮೂಲಕ
ಚಾಮರಾಜನಗರವು ಮೈಸೂರು, ಬೆಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
ವಾಯುಮಾರ್ಗ
ಚಾಮರಾಜನಗರವು ವಿಮಾನ ನಿಲ್ದಾಣವನ್ನು ಹೊಂದಿಲ್ಲ ಮತ್ತು ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು, ಅಲ್ಲಿಂದ ಭಾರತದಾದ್ಯಂತ ಪ್ರಮುಖ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ.