ಕರಿವರದರಾಜಸ್ವಾಮಿ ಬೆಟ್ಟ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಚಾಮರಾಜನಗರದ ನೈರುತ್ಯ ಭಾಗದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟ ಚಾಮರಾಜನಗರಕ್ಕೆ ಪ್ರಭಾವಳಿ ಇದ್ದಂತೆ, ಈ ಬೆಟ್ಟವು ಧಾರ್ಮಿಕ, ಪ್ರಾಕೃತಿಕ ಮತ್ತು ಕ್ರೀಡಾ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದ ಔಷಧೀಯ ಸಸ್ಯಗಳ ಉದ್ಯನವನವಿದು. ಇಲ್ಲಿ ಹೊಯ್ಸಳರ ಕಾಲದ 2.5 ಅಡಿ ಎತ್ತರದ ಕರಿವರದರಾಜಸ್ವಾಮಿ ಮೂರ್ತಿಯು ಅತ್ಯಂತ ಸುಂದರವಾಗಿದೆ. ಬೆಟ್ಟಕ್ಕೆ 815 ಮೆಟ್ಟಿಲುಗಳಿದ್ದು, ಪ್ರವಾಸಿಗರು ಮತ್ತು ಸ್ಥಳೀಯರ ಆಕರ್ಷಣೆಗೆ ಒಳಗಾಗಿದೆ.