Close

ವಿಜಯನಾರಾಯಣ ದೇವಾಲಯ

ವರ್ಗ ಧಾರ್ಮಿಕ
  • ವಿಜಯನಾರಾಯಣ (ಜನಾರ್ಧನ) ದೇವಾಲಯವನ್ನು ಹೊಯ್ಸಳ ವಿಷ್ಣುವರ್ಧನನು ನಿರ್ಮಿಸಿದನು ಎಂಬ ಪ್ರತೀತಿ.
  • ಕ್ರಿ.ಶ 11 ರಿಂದ 15ನೇ ಶತಮಾನಾದ ಕಾಲದಲ್ಲಿ ನಿರ್ಮಾಣವಾದ ವಿವಿಧ ಹಂತಗಳ ರಚನೆಯಿದೆ. ಈ ದೇವಾಲಯವು ತಳ ವಿನ್ಯಾಸದಲ್ಲಿ ಗರ್ಭಗೃಹ, ಸುಖನಾಸಿ ನವರಂಗ ಮತ್ತು ಮಂಟಪಗಳನ್ನು ಹೊಂದಿದೆ. ದೇವಾಲಯದ ಮೂರ್ತಿಯು ಬೇಲೂರು ಮತ್ತು ತಲಕಾಡಿನ ಮೂರ್ತಿಗಳಿಗಿಂತ ಚಿಕ್ಕದಾಗಿ ದೇವಾಲಯದ ಮುಂಭಾಗದಲ್ಲಿರುವ ವಿಜಯನಗರ ಕಾಲದ ಮಂಟಪ ವಿಶೇಷ ಆಕರ್ಷಣೆ.