ನರಸಮಂಗಲದ ರಾಮಲಿಂಗೇಶ್ವರ ದೇವಾಲಯ
ವರ್ಗ ಐತಿಹಾಸಿಕ
- ನರಸಮಂಗಲದ ರಾಮೇಶ್ವರ ದೇವಾಲಯ ಸಂಕೀರ್ಣ 8ನೇ ಶತಮಾನಕ್ಕೆ ಸೇರಿದ್ದು, ವಾಸ್ತು ವಿನ್ಯಾಸವು ಗಂಗರ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ.
- ಚಾಮರಾಜನಗರ ಜಿಲ್ಲೆಯ ಒಂದು ಪುಟ್ಟ ಗ್ರಾಮ ನರಸಮಂಗಲ. ಕಪ್ಪುಶಿಲೆಯಿಂದ ನಿರ್ಮಿಸಿರಬಹುದಾದ 6 ಅಡಿಗಳಷ್ಟು ಎತ್ತರ 12 ಅಡಿಗಳಷ್ಟು ಸುತ್ತಳತೆಯಿಂದ ಕೂಡಿದ ಶಿವಲಿಂಗವು ಕಿರಿದಾದ ಗರ್ಭಗುಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ಇಲ್ಲಿನ ನವರಂಗವು ವಿಶಾಲವಾಗಿದ್ದು 9 ಅಂಕಣಗಳಿಂದ ಕೂಡಿದೆ. ವಿಮಾನಗೋಪುರವು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು ಗಮನಾರ್ಹ ವಿಷಯ. ಇಲ್ಲಿರುವ ಬೃಹದಾಕಾರದ ಗಣಪತಿಯು ಈ ಸೀಮೆಯಲ್ಲೇ ಅಪರೂಪವಾಗಿರುತ್ತದೆ. ಸುಂದರವಾದ ಸಪ್ತಮಾತೃಕೆಯರ ವಿಗ್ರಹಗಳು ಹಾಗೂ ಹೊಯ್ಸಳ ವೀರ ಬಲ್ಲಾಳನು ಈ ದೇವಾಲಯಕ್ಕೆ ದತ್ತಿ ಬಿಟ್ಟಿರುವ ಶಾಸನಗಳು ಇಲ್ಲಿವೆ.