ಕ್ಯಾತದೇವರ ಗುಡಿ (ಕೆ.ಗುಡಿ)
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಕೆ.ಗುಡಿ ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ, ಸಮುದ್ರ ಮಟ್ಟದಿಂದ 1450 ಮೀ.ಗಳಷ್ಟು ಎತ್ತರದಲ್ಲಿದೆ. ಚಾಮರಾಜನಗರ ಪಟ್ಟಣದಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿ ಜಂಗಲ್ ಲಾಡ್ಜಸ್ ಸಂಸ್ಥೆಯ ವಸತಿ ಗೃಹವಿದೆ. ಅರಣ್ಯ ಇಲಾಖೆಯ ತೆರೆದ ವಾಹನದಲ್ಲಿನ ಸಫಾರಿ ಬಹು ಜನಪ್ರಿಯ. ಕೆ.ಗುಡಿ ದೇಶ-ವಿದೇಶಗಳ ಪ್ರವಾಸಿಗರ ಆಗಮನವಿದೆ. ಪ್ರಾಣಿ, ಪಕ್ಷಿ, ಪ್ರಕೃತಿ, ಔಷಧೀಯ ಸಸ್ಯಗಳ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ.ಗುಡಿ ರಮ್ಯ ತಾಣ. ಇಲ್ಲಿ ತಂಗಲು ಮೊದಲೇ ಕಾಯ್ದಿರಿಸಿ ಬರುವುದು ಅವಶ್ಯಕ. ಕನ್ನರೆ ಕಾಲೋನಿ ಹಾಗೂ ಭೂತಾಣಿ ಪೋಡುಗಳಲ್ಲಿ ಸೋಲಿಗ ಬುಡಕಟ್ಟು ಜನಾಂಗದ ಮತ್ತೊಂದು ವೈಶಿಷ್ಟ್ಯವನ್ನು ಕಾಣಬಹುದಾಗಿದೆ.