ಯಳಂದೂರಿನ ದಿವಾನ್ ಪೂರ್ಣಯ್ಯನವರ ನಿವಾಸ ಮತ್ತು ಛತ್ರ
ವರ್ಗ ಐತಿಹಾಸಿಕ
ಶ್ರೀ ಪೂರ್ಣಯ್ಯ ನವರು ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು, ಪೂರ್ಣಯ್ಯ ದಿವಾನ ರವರ ನಿವೃತ್ತಿ ನಂತರ ಕೃಷ್ಣರಾಜ ಒಡೆಯರ್ ರವರು ಯಳಂದೂರನ್ನು ದತ್ತಿಯಾಗಿ ಹಾಗೂ ಈ ಬಂಗಲೆಯನ್ನು ಕ್ರಿ.ಶ 1807ರಲ್ಲಿ ಉಡುಗೊರೆಯಾಗಿ ನೀಡಿದರು. ವಿಭಿನ್ನ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಬಂಗಲೆ ಸ್ಮಾರಕವಾಗಿದೆ. ಪ್ರಸ್ತುತ ರಾಜ್ಯ ಪುರಾತತ್ವ ಇಲಾಖೆಯಿಂದ ಈ ಬಂಗಲೆಯನ್ನು ನವೀಕರಿಸಿ ದಿವಾನ್ ಪೂರ್ಣಯ್ಯನವರ ಜೀವನ ಚರಿತ್ರೆ, ಆಳ್ವಿಕೆ, ಜಿಲ್ಲೆಯ ಐತಿಹಾಸಿಕ ಸಂಗತಿಗಳ ಬಗ್ಗೆ ಮಾಹಿತಿ ನೀಡುವ ವಸ್ತು ಸಂಗ್ರಹಾಲಯವಾಗಿ ರೂಪಿಸಿ ನಿರ್ವಹಿಸಲಾಗುತ್ತಿದೆ. ಇದು ಯಳಂದೂರು ಪಟ್ಟಣದಲ್ಲಿದೆ.