ಬಿಳಿಗಿರಿರಂಗನ ಬೆಟ್ಟ
ವರ್ಗ ಐತಿಹಾಸಿಕ, ಧಾರ್ಮಿಕ
ಬಿಳಿಗಿರಿರಂಗನ ಬೆಟ್ಟಗಳು ಸಾಮಾನ್ಯವಾಗಿ ಬಿಆರ್ ಬೆಟ್ಟಗಳು ಎಂದು ಕರೆಯಲ್ಪಡುತ್ತವೆ, ಇದು ಆಗ್ನೇಯ ಕರ್ನಾಟಕದ ಒಂದು ಬೆಟ್ಟ ಶ್ರೇಣಿಯಾಗಿದ್ದು, ದಕ್ಷಿಣ ಭಾರತದ ತಮಿಳುನಾಡಿನ (ಈರೋಡ್ ಜಿಲ್ಲೆ) ಗಡಿಯಲ್ಲಿದೆ. ಈ ಪ್ರದೇಶವನ್ನು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಅಭಯಾರಣ್ಯ ಅಥವಾ ಸರಳವಾಗಿ ಬಿಆರ್ ಟಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ.
ಫೋಟೋ ಗ್ಯಾಲರಿ
ಎಲ್ಲವನ್ನೂ ವೀಕ್ಷಿಸಿತಲುಪುವ ಬಗೆ :
ವಿಮಾನದಲ್ಲಿ
ಚಾಮರಾಜನಗರದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಮೈಸೂರು ಮತ್ತು ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ.
ರೈಲಿನಿಂದ
ಚಾಮರಾಜನಗರವು ಮೈಸೂರು ಮತ್ತು ಬೆಂಗಳೂರು ರೈಲು ಸಂಪರ್ಕ ಹೊಂದಿದೆ.
ರಸ್ತೆ ಮೂಲಕ
ಬಿಳಿಗಿರಿರಂಗನ ಬೆಟ್ಟ ಯಳಂದೂರುದಿಂದ 20 ಕಿ.ಮೀ. ಮತ್ತು ಚಾಮರಾಜನಗರದಿಂದ 40 ಕಿ.ಮೀ.ದೂರದಲ್ಲಿದೆ. ಚಾಮರಾಜನಗರ ಮತ್ತು ಯಳಂದೂರುದಿಂದ ವ್ಯವಸ್ಥಿತವಾದ ಬಸ್ ಸೇವೆ ಹಾಗೂ ಟ್ಯಾಕ್ಸಿಗಳು ದೊರೆಯುತ್ತವೆ