ಮುಖಪುಟ ಜಿಲ್ಲಾ ಪ್ರೊಫೈಲ್ ಜಿಲ್ಲಾ ಅಂಕಿಅಂಶ ಜಿಲ್ಲೆಯನಕ್ಷೆ ಪ್ರವಾಸೋದ್ಯಮ ಫೋಟೋ ಗ್ಯಾಲರಿ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ
ಮಲೆ ಮಹದೇಶ್ವರ ಬೆಟ್ಟ ರಾಜಕೀಯ ದೃಶ್ಯಾವಳಿ ಕಂದಾಯ ಇಲಾಖೆ ಜಿಲ್ಲಾಪಂಚಾಯತ್ ಆರೋಗ್ಯ ಇಲಾಖೆ ಶಿಕ್ಷಣ ಎನ್ ಐ ಸಿ ಬಗ್ಗೆ
ಕೃ಼ಷಿ ವಿಜ್ಙಾನ ಕೇಂದ್ರ ಹರದನಹಳ್ಳಿ

ಅರಣ್ಯ ಹಕ್ಕುಗಳು

:: ಯಳಂದೂರು ತಾಲ್ಲೂಕು ::

        ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೂಕು, ಜಿಲ್ಲೆಯ ಅತ್ಯಂತ ಚಿಕ್ಕತಾಲ್ಲೂಕಾಗಿರುವ ಯಳಂದೂರು ವಾಯುವ್ಯ, ಉತ್ತರ ಮತ್ತು ಪೂರ್ವದಲ್ಲಿ ಕೊಳ್ಳೇಗಾಲ ತಾಲ್ಲೂಕು, ಪಶ್ಚಿಮ ಮತ್ತು ದಕ್ಷಿಣದಲ್ಲಿ ಚಾಮರಾಜನಗರ ತಾಲ್ಲೂಕು ಸುತ್ತವರ್ಇದಿದೆ. ಯಳಂದೂರು, ಅಗರ ಈ ತಾಲ್ಲೂಕಿನ ಹೋಬಳಿಗಳು.

ಇತಿಹಾಸ

        ತಮಿಳು ಶಾಸನವೊಂದರಿಂದ ಯಳಂದೂರನ್ನು ಪ್ರದೇಶ ಚೋಳರ ಆಳ್ವಿಕೆಯಲ್ಲಿತ್ತೆಂದು ಹೇಳಲಾಗಿದೆ. ಹಿಂದೆ ಈ ಹದಿನಾಡು ಪ್ರಾಂತ್ರಯದ ರಾಜಧಾನಿಯಾಗಿತ್ತೆಂದೂ ವಿಜಯನಗರದ ಅರಸರ ಕಾಲದಲ್ಲಿ ಸಂಪದ್ಭರಿತವಾಗಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರು ಯಳಂದೂರು ತಾಲ್ಲೂಕನ್ನು ದಿವಾನ್ ಪೂರ್ಣಯ್ಯನವರಿಗೆ ಜಹಗೀರಿಯಾಗಿ ಕೊಟ್ಟಿದ್ದು, ಇನಾಂ ಪದ್ದತಿ ಶಾಸನಕ್ಕೆ ಅನುಗುಣವಾಗಿ ಈ ತಾಲ್ಲೂಕು ಸರ್ಕಾರದ ವಶಕ್ಕೆ ಸೇರಿತು

ಪ್ರಸಿದ್ದ ದೇವಾಲಯ

        ಇಲ್ಲಿ ಗೌರೀಶ್ವರ ದೇವಾಲಯವನ್ನು ಹದಿನಾಡದೊರೆ ಸಿಂಗಿದೇವ 1450 ರಲ್ಲಿ ಕಟ್ಟಿಸಿದನೆಂದು ತಿಳಿಯುತ್ತದೆ. ಗೌರೀಶ್ವರ ದೇವಾಲಯದ ಶಾಸನವೊಂದರಲ್ಲಿ ಈ ಊರನ್ನು ಎಳೆಯಂದೂರು (ಎಳೆಯ ಚಂದ್ರನ, ಬಾಲಚಂದ್ರನ ಊರು) ಎಂದು ಕರೆಯಲಾಗಿದೆ.

ಎಂಟುಗಿರಿಗಳು:

       ಈ ಊರು ಪೂರ್ವದಿಕ್ಇನ ಶ್ವೇತಗಿರಿ (ಬಿಳಿಗಿರಿ) ಆಗ್ನೇಯ ದಿಕ್ಕಿನಲ್ಲಿ ಮಲ್ಲಿನಾಥಗಿರಿ ದಕ್ಷಿಣ ದಿಕ್ಕಿನ ಸುರಗಿರಿ, ನೈರುತ್ಯ ದಿಕ್ಕಿನ ಶಂಕರೇಶ್ವರಗಿರಿ, ಪಶ್ಚಿಮ ದಿಕ್ಕಿನ ಮಲ್ಲಿಕಾರ್ಜುನ ಗಿರಿ ವಾಯುವ್ಯ ದಿಕ್ಕಿನ ಶಂಭುಲಿಂಗನಗಿರಿ. ಉತ್ತರ ದಿಕ್ಕಿನ ಶ್ರೀ ಶ್ಐಲಗಿರಿ, ಈಶಾನ್ಯ ದಿಕ್ಕಿನ ನಿರ್ಮಲಗಿರಿ, ಈ ಎಂಟು ಗಿರಿಗಳ ನಡುವೆ ಕಂಗೋಲಿಸುತ್ತಿತ್ತೆಂದೂ ಶಾಸನದಲ್ಲಿ ವರ್ಣಿಸಿದೆ.

ಇಳಮರದೂರು

        ಯಳಂದೂರಿನ ಪ್ರಾಚೀನ ಹೆಸರು ಇಳಮರದೂರು ಎಂದು ಪುರಾತನವಾದ ತಮಿಳು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಊರನ್ನು ಚೋಳರ ಶಾಸನಗಳಲ್ಲಿ ಚೋಳೇಂದ್ರ ಸಿಂಹಚರ್ತುವೇದಿ ಮಂಗಲಂ ಎಂದು ಕರೆಯಲಾಗಿದೆ.

ಷಡಕ್ಷರಯ್ಯನ ಗುಹೆ:

        ರಾಜಶೇಖರವಿಲಾಸದ ಕರ್ತೃ ಪ್ರಸಿದ್ದ ವೀರಶೈವ ಕವಿ ಷಡಕ್ಷರದೇವ ಇಲ್ಲಿನ ದನಗೂರು ಮಠದಲ್ಲಿ ಕೆಲವು ಕಾಲ ಇದ್ದನೆಂದು ಯಳಂದೂರಿಗೆ ಸುಮಾರು 5 ಕಿ.ಮೀ. ದೂರದಲ್ಲಿರುವ ಶಂಭುಲಿಂಗಬೆಟ್ಟದಲ್ಲಿನ ಗುಹೆಯಲ್ಲಿ ಧ್ಯಾನಸಕ್ತನಾಗುತ್ತಿದ್ದನೆಂದು ತಿಳಿದುಬರುತ್ತದೆ. ಈಗಲೂ ಷಡಕ್ಷರಯ್ಯನ ಗುಹೆ ಎಂದು ಕರೆಯುತ್ತಾರೆ

ಪ್ರೇಕ್ಷಣೀಯ ಸ್ಥಳಗಳು

        ಬಿಳಿಗಿರಿರಂಗನಬೆಟ್ಟ: ದಟ್ಟವಾಗಿ ಬೆಳೆದ ಮರಗಳಿಂದ ತುಂಬಿದ ಈ ಬೆಟ್ಟವು ಸಮು್ರ ಮಟ್ಟದಿಮದ 5,091 ಅಡಿ ಎತ್ರದಲ್ಲಿದ್ದು, ದಕ್ಷಿಣೋತ್ತರವಾಗಿ 16 ಕಿ.ಮೀ. ನಷ್ಟು ಹರಡಿಕೊಂಡಿದೆ. ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿಯ ಗುಡಿಯಿದ್ದು, ಅದರಿಂದಾಗಿ ಈ ಬೆಟ್ಟಕ್ಕೆ ಈ ಹೆಸರು ಪ್ರಾಪ್ತವಾಗಿದೆ. ಶಾಸನಗಳಲ್ಲಿ ಈ ಬೆಟ್ಟವನ್ನು ಶ್ವೇತಾದ್ರಿಯೆಂದು ವರ್ಣಿಸಲಾಗಿದೆ. ಇಲ್ಲಿರುವ ದೇವಾಲಯ ದ್ರಾವಿಡ ಶೈಲಿಯ ದೊಡ್ಡ ಪುರಾತನ ಕಟ್ಟಡವಾಗಿದೆ. ಈ ದೇವಾಲಯದಲ್ಲಿನ ದೇವರು ವೆಂಕಟೇಶನಾದರೂ ಆತ ರಂಗನಾಥ ಎಂದು ಜನಪ್ರಿಯನಾಗಿದ್ದಾನೆ. ರಾಮಾನುಜ ಹಾಗೂ ಆಳ್ವಾರ ಮೂರ್ತಿಗಳನ್ನು ಈ ಮಂದಿರದಲ್ಲಿ ಇರಿಸಲಾಗಿದೆ. ಕನಕದಾಸ ಗುಹೆ, ಬೃಂದಾವನ ಹಾಗೂ ಬೆಟ್ಟದ ಮೇಲಿನ ಇತರೆ ಗುಡಿಗಳು ಧಾರ್ಮಿಕ ಮಹತ್ವದ ಸ್ಥಳವಾಗಿವೆ. 15-16ನೆಯ ಶತಮಾನಗಳಲ್ಲಿ ಶಿವನಸಮುದ್ರದ ಗಂಗರಾಜರಿಂದ ನಿರ್ಮಿತವಾದುದೆಂದು ಹೇಳುವ ಕಂಚಿನಕೋಟೆ ಎಂಬ ಹಳೆಯ ಕೋಟೆಯ ಅವಶೇಷಗಳು ಅಲ್ಲಿವೆ. ಬೆಟ್ಟದ ಅಡಿಯಲ್ಲಿ ಹರಿಯುತ್ತಿರುವ ಹಳ್ಳವನ್ನು ಭಾರ್ಗವ ತೊರೆ ಎಂದು ಕರೆಯುತ್ತಾರೆ. ಈ ಬೆಟ್ಟದಲ್ಲಿರುವ ಅರಣ್ಯವು ಎತ್ತರವಾಗಿ ಬೆಳೆದ ಹುಲ್ಲು, ಮರಗಳಿಂದ ಹಾಗೂ ಆನೆ, ಹುಲಿ, ಚಿರತೆ, ಜಿಂಕೆ ಹಾಗೂ ಕರಡಿಗಳಿಂದ ತುಂಬಿದೆ. ಈ ಸ್ಥಳದಲ್ಲಿ ಸೋಲಿಗರೆಂಬ ಗುಡ್ಡಗಾಡು ಜನರು ವಾಸವಾಗಿದ್ದು, ಅವರು ಈ ಸ್ಥಳದ ದೇವತೆಯ ಬಗ್ಗೆ ಗಾಢವಾದ ಭಕ್ತಿಯನ್ನು ತಳೆದಿದ್ದಾರೆ. ಬೆಟ್ಟದ ಮೇಲಿರುವ ಸಮತಟ್ಟು ಪ್ರದೇಶದಲ್ಲಿ ತೋಟಗಾರಿಕೆ ರೇಷ್ಮೆ ಹುಳು ಸಾಕಣಿಕೆಯ ತೋಟಗಳಲ್ಲದೆ, ಮೀನುಗಾರಿಕೆಯ ಕೆರೆಗಳೂ ಇದ್ದು, ಅವುಗಳಲ್ಲಿ ವಿಶಿಷ್ಟ ಜಾತಿಯ ಮೀನಿನ ತಳಿಗಳನ್ನು ಕಾಯ್ದಿಡಲಾಗಿದೆ. ಜೇನು ಸಾಕಣೆ, ಬುಟ್ಟಿ ಹೆಣಿಯುವ ಕೇಂದ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ

ಖ್ಯಾತನಾಮರು:

        ವೈದ್ಯಗ್ರಂಥ ಒಂದನ್ನು ಬರೆದ ನರಸಿಂಹಭಟ್ಟ, ಹದಿಬದೆಯ ಧರ್ಮವನ್ನು ಬರೆದ ಸಂಚಿ ಹೊನ್ನಮ್ಮ, ಜೈನವಿದ್ವಾಂಸರಾದ ವಿಶಾಲಾಕ್ಷಪಂಡಿತ ಇವರು ಈ ಊರಿನವರೆಂದು ಗುರುತಿಸಲಾಗಿದೆ. ವೈ.ಎನ್. ಕೃಷ್ಣಮೂರ್ತಿ (‘ಕನ್ನಡ ಪ್ರಭ’ ಸಂಪಾದಕರು) ಯಳಂದೂರಿನವರು. ಅಗರ ಮತ್ತು ಬಿಳಿಗಿರಿರಂಗನಬೆಟ್ಟ, ಅಗರದಲ್ಲಿ ರಾಮೇಶ್ವರ, ನರಸಿಂಹ, ವರದರಾಜ ಮತ್ತು ದುರ್ಗಾದೇವಿ ಎಂಬ ನಾಲ್ಕು ಪ್ರಾಚೀನ ದೇವಾಲಯಗಳಿವೆ.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ::

       ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಡಾ. ಸುದರ್ಶನ್ ಸ್ಥಾಪಿಸಿದ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರ ಬಿಳಿಗಿರಿರಂಗನಬೆಟ್ಟದಲ್ಲಿದೆ. ಡಾ. ಸುದರ್ಶನ್ ರವರ ಸೇವೆಗಾಗಿ ಅಂತರ ರಾಷ್ಟ್ರೀಯ ರೈಟ್್ಲೈೇವ್ಲಿವುಡ್ ಪ್ರಶಸ್ತಿದೊರಕಿದೆ. ಇವರು ಯೋಜಿಸಿರುವ ಟ್ರಸ್ಟ್ ಯಳಂದೂರಿನಲ್ಲಿ ಸ್ಥಾಪನೆಗೊಂಡು ಕುಷ್ಟರೋಗ ನಿರ್ಮೂಲನೆಯಲ್ಲಿ ತೊಡಗಿಸಿಕೊಂಡಿದೆ. ಸರ್ಕಾರದ ಅನುದಾನದಿಮದ ಗುಂಬಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಇದರಿಂದಲೇ ಆರಂಭಗೊಂಡು ಸೇವೆ ಸಲ್ಲಿಸುತ್ತಿದೆ.

ಅಂಕಿ-ಅಂಶ::

        ತಾಲ್ಲೂಕಿನ ವಿಸ್ತೀಣ್ತ 265 ಚ.ಕಿ.ಮೀ. ತಾಲ್ಲೂಕಿನಲ್ಲಿ ಒಟ್ಟು 26 ಗ್ರಾಮಗಳಿವೆ. ಈ ಪೈಕಿ ಜನವಸತಿ ಇರುವ ಗ್ರಾಮಗಳ ಸಂಖ್ಯೆ 26 ಉಳಿದ ಗ್ರಾಮಗಳಲ್ಲಿ ಜನವಸತಿ ಇರುವುದಿಲ್ಲ. 1991ರ ಜನಗಣತಿಯಂತೆ ಜನಸಂಖ್ಯೆ 71,700 ಜನಸಾಂದ್ರತೆ 271 ಪ್ರತಿ ಚದರ ಕಿ.ಮೀ. ರಷ್ಟಿದೆ. ಯಳಂದೂರಿನಿಂದ 19 ಕಿ.ಮೀ. ದೂರದಲ್ಲಿ ಚಾಮರಾಜನಗರ ಇದೆ.

ಮಳೆ-ಬೆಳೆ::

        ತಾಲ್ಲೂಕಿನ ಹೆಚ್ಚಿನ ಪ್ರದೇಶ ಸಮತಟ್ಟಾಗಿದ್ದು, ವ್ಯವಸಾಯ ಯೋಗ್ಯ ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಕಪ್ಪು ಮಣ್ಣಿನ ಭೂಪ್ರದೇಶವನ್ನೊಳಗೊಂಡಿದೆ. ಕೆರೆಗಳ ಆಶ್ರಯದಲ್ಲಿ ಭತ್ತ, ಕಬ್ಬು ಬೆಳೆಯುತ್ತಾರೆ. ತೆಂಗು, ಅಡಿಕೆ, ಹಿಪ್ಪು ನೇರಳೆ, ವೀಳೆಯದೆಲೆ ಈ ತಾಲ್ಲೂಕಿನ ಮುಖ್ಯ ಬೆಳೆಗಳು, ಮಳೆಯನ್ನೇ ಆಶ್ರಯಿಸಿ ರಾಗಿ, ಜೋಳ, ಬೆಳೆಯುತ್ತಾರೆ. ರೇಷ್ಮೆನೂಲು ತೆಗೆಯುವುದು ಈ ತಾಲ್ಲೋಕಿನ ಪ್ರಮುಖ ಗೃಹಕೈಗಾರಿಕೆ ಮಳೆ ಸರಾಸರಿ 793 ಮಿ.ಮೀ.

ಸುವರ್ಣಾವತಿ:

        ಈ ತಾಲ್ಲೂಕಿನ ಮುಖ್ಯ ನದಿ ಸುವರ್ಣಾವತಿ ಈ ನದಿ ತಾಲ್ಲೂಕನ್ನು ಅಂಬಳೆ ಗ್ರಾಮದ ಪಶ್ಚಿಮದಲ್ಲಿ ಪ್ರವೇಶಿಸಿ ನೈಋತ್ಯದಿಂದ ಯಳಂದೂರು ಮೂಲಕ ಈಶಾನ್ಯಾಭಿಮುಖವಾಗಿ ಹರಿದು ಅಗರ ಮೂಲಕ ಕೊಳ್ಳೇಗಾಲ ತಾಲ್ಲೂಕನ್ನು ಪ್ರವೇಶಿಸುತ್ತದೆ.

Back

ಹಕ್ಕುತ್ಯಾಗ: ವೆಬ್ಸೈಟ್ನ ಪರಿವಿಡಿಯನ್ನು ಜಿಲ್ಲಾ ಆಡಳಿತವು ಒದಗಿಸಿದೆ .
ಯಾವುದಕ್ಕಾದರೂ ಸಲಹೆ ಮೇಲ್ karcha@hub2.nic.in. ಅತ್ಯುತ್ತಮ ವೀಕ್ಷಣೆ 800X600 ಪಿಕ್ಸೆಲ್ಗಳಲ್ಲ.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್, ಚಾಮರಾಜನಗರ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ