ಮುಖಪುಟ ಜಿಲ್ಲಾ ಪ್ರೊಫೈಲ್ ಜಿಲ್ಲಾ ಅಂಕಿಅಂಶ ಜಿಲ್ಲೆಯನಕ್ಷೆ ಪ್ರವಾಸೋದ್ಯಮ ಫೋಟೋ ಗ್ಯಾಲರಿ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ
ಮಲೆ ಮಹದೇಶ್ವರ ಬೆಟ್ಟ ರಾಜಕೀಯ ದೃಶ್ಯಾವಳಿ ಕಂದಾಯ ಇಲಾಖೆ ಜಿಲ್ಲಾಪಂಚಾಯತ್ ಆರೋಗ್ಯ ಇಲಾಖೆ ಶಿಕ್ಷಣ ಎನ್ ಐ ಸಿ ಬಗ್ಗೆ
ಕೃ಼ಷಿ ವಿಜ್ಙಾನ ಕೇಂದ್ರ ಹರದನಹಳ್ಳಿ

ಅರಣ್ಯ ಹಕ್ಕುಗಳು

ಚಾಮರಾಜನಗರ ಜಿಲ್ಲೆಯ ಇತಿಹಾಸ- ಪಕ್ಷಿ ನೋಟ

        ಚಾಮರಾಜನಗರವು ಕೇಂದ್ರ ಹಾಗೂ ತಾಲ್ಲೂಕು ಕೇಂದ್ರ ಕೂಡ. ಇದು ಕರ್ನಾಟಕ ರಾಜ್ಯದ ದಕ್ಷಿಣ ತುದಿಯ ತಮಿಳುನಾಡು ಗಡಿ ಭಾಗದಲ್ಲಿದೆ. ಪಶ್ಚಿಮಕ್ಕೆ ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲ್ಲೂಕುಗಳು ಇವೆ. ಉತ್ತರಕ್ಕೆ ಟಿ. ನರಸೀಪುರ, ಪೂರ್ವಕ್ಕೆ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಿವೆ. ದಕ್ಷಿಣಕ್ಕೆ ತಮಿಳುನಾಡು ಇವು ತಾಲ್ಲೂಕಿನ ಎಲ್ಲೆಗಳು, ಚಾಮರಾಜನಗರ, ಹರದನಹಳ್ಳಿ, ಹರವೆ, ಸಂತೇಮರಹಳ್ಳಿ, ಚಂದಕವಾಡಿ ಈ ಐದು ಹೋಬಳಿಗಳು ತಾಲ್ಲೂಕಿಗೆ ಸೇರಿವೆ.

        ಚಾಮರಾಜನಗರವು ಕೇಂದ್ರ ಹಾಗೂ ತಾಲ್ಲೂಕು ಕೇಂದ್ರ ಕೂಡ. ಇದು ಕರ್ನಾಟಕ ರಾಜ್ಯದ ದಕ್ಷಿಣ ತುದಿಯ ತಮಿಳುನಾಡು ಗಡಿ ಭಾಗದಲ್ಲಿದೆ. ಪಶ್ಚಿಮಕ್ಕೆ ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲ್ಲೂಕುಗಳು ಇವೆ. ಉತ್ತರಕ್ಕೆ ಟಿ. ನರಸೀಪುರ, ಪೂರ್ವಕ್ಕೆ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಿವೆ. ದಕ್ಷಿಣಕ್ಕೆ ತಮಿಳುನಾಡು ಇವು ತಾಲ್ಲೂಕಿನ ಎಲ್ಲೆಗಳು, ಚಾಮರಾಜನಗರ, ಹರದನಹಳ್ಳಿ, ಹರವೆ, ಸಂತೇಮರಹಳ್ಳಿ, ಚಂದಕವಾಡಿ ಈ ಐದು ಹೋಬಳಿಗಳು ತಾಲ್ಲೂಕಿಗೆ ಸೇರಿವೆ.

ಐತಿಹಾಸಿಕ ಅಂಶಗಳು

ಗಂಗರು, ಕಲ್ಯಾಣದ ಚಾಲುಕ್ಯರು, ಚೋಳರು, ಹೊಯ್ಸಳರು, ವಿಜಯನಗರದ ಮೈಸೂರು ಒಡೆಯರು ಮತ್ತು ಉಮ್ಮತ್ತೂರು ನಂದ್ಯಾಲ ಕಳೆಲೆಯ ಮುಖ್ಯಸ್ಥರು ಆಳಿದ್ದಾರೆ. ಈ ವಿವಿಧ ಅರಸು ಮನೆನತನಗಳಿಗೆ ಸೇರಿದ ಅರಸುರು ಕ್ರಿ.ಶ. 8ನೇಯ ಶತಮಾನದಿಂದ 1950 ರವರಿಗೆ ಈ ತಾಲ್ಲೂಕಿನ ಆಡಳಿತವನ್ನು ನಡೆಸಿದ್ದಾರೆ. ಈ ತಾಲ್ಲೂಕಿನಲ್ಲಿ ಇದುವರೆಗೆ 410 ಶಾಸನಗಳು ದೊರಕಿವೆ. ಹೊಯ್ಸಳ ದೊರೆ ವಿಷ್ಣುವರ್ದನನ ಸೇನಾಧಿಕಾರಿಯಾಗಿದ್ದ ಪುಣೆಸ, ಿಲ್ಲಿ 1117 ರಲ್ಲಿ ಜೈನಬಸ್ತಿಯೊಂದನ್ನು ಕಟ್ಟಿಸಿದ. ಇವರು ತೋಡರನ್ನು ಹೆದರಿಸಿ ನೀಲಗಿರಿಯನ್ನು ವಶಪಡಿಸಿಕೊಂಡು ಈ ಸುತ್ತನ್ನೆಲ್ಲ ಆಳಿದನೆಂದು ತಿಳಿದುಬರುತ್ತದೆ.

ಅರಿಕುಠಾರ:- ಈ ಸ್ಥಳಕ್ಕೆ ಹಿಂದೆ ಅರಿಕುಠಾರ ಅಥವಾ ಅರಿಕೂಠಾರ ಎಂಬ ಹೆಸರಿತ್ತು. ಒಡೆಯನೂರು ಎಂದು ಕರೆಯಲಾಗುತ್ತಿತ್ತು.

9ನೇ ಚಾಮರಾಜ ಒಡೆಯರ್: (ಕ್ರಿ.ಶ. 1974-1976) ಮೈಸೂರನ್ನಾಳಿದ ಒಡೆಯರ ಪೈಕಿ 9ನೇ ಖಾಸಾ ಚಾಮರಾಜನಗರ ಒಡೆಯರ್ ಅವರು ಕ್ರಿ.ಶ. 19774ರಲ್ಲಿ ಇಲ್ಲಿ ಜನಿಸಿದರು. ಸ್ಮರಣಾರ್ಥ ಅವರ ಜನಿಸಿದ ಸ್ಥಳದಲ್ಲಿ ನಗರದ ಮಧ್ಯಭಾಗದಲ್ಲಿ ಜನನಮಂಟಪ ವನ್ನು ನಿರ್ಮಿಸಲಾಗಿದೆ. ಈಗ ಈ ಕಟ್ಟಡವನ್ನು ಪುರಾತನ ಸಂರಕ್ಷಣಾ ಸ್ಮಾರಕವೆಂದು ಸರ್ಕಾರ ಘೋಷಿಸಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್: (ಕ್ರಿ.ಶ 1794-1868)

ಚಾಮರಾಜನಗರ ಒಡೆಯರ ನಂತರ ತಮ್ಮ ತಂದೆಯ ಜನ್ಮಸ್ಥಳವಾದ ಈ ಊರನ್ನು ಹೊಸದಾಗಿ ಕಟ್ಟಿಸಿ ಕ್ರಿ.ಶ. 1818 ರಲ್ಲಿ ಚಾಮರಾಜನಗರವೆಂದು ನಾಮಕರಣ ಮಾಡಿದರು. ಇಲ್ಲಿ ಭವ್ಯವಾದ ಶ್ರೀ ಚಾಮರಾಜೇಶ್ವರ ದೇವಾಲಯವನ್ನು (1826)ರಲ್ಲಿ ನಿರ್ಮಿಸಿದರು. ಆಷಾಡಮಾಸದಲ್ಲಿ ಇಲ್ಲಿ ಮಹಾರಥೋತ್ಸವ ಇಂದಿಗೂ ವೈಭವಾಗಿ ನಡೆಯುತ್ತಿದೆ.

ದೇವಸ್ಥಾನಗಳು:- ಚಾಮರಾಜನಗರ ಪಟ್ಟಣದಲ್ಲಿರುವ ದೇವಾಲಯಗಳೆಂದರೆ ಭುಜಂಗೇಶ್ವರ, ವೀರಭದ್ರನಗುಡಿ, ಕಾಡುನಾರಾಯಣಸ್ವಾಮಿ, ಚೌಡೇಶ್ವರಿ, ಕನ್ನಿಕಾಪರಮೇಶ್ವರಿ ಇತ್ಯಾದಿ, ಖಾಸಗಿ ಬಸ್ನಿಲ್ದಾಣದಲ್ಲಿ ಮಾರಿಗುಡಿ, ಸಂಪಿಗೆ ರಸ್ತೆಯಲ್ಲಿ ಶ್ರೀಕಂಠೇಶ್ವರ, ಸಂತೇಮರಹಳ್ಳಿ ರಸ್ತೆಯಲ್ಲಿ ಮಂಟೇಸ್ವಾಮಿ ಹಾಗೂ ಪುಟ್ಟಮ್ಮಣ್ಣಿ ದೇವಸ್ಥಾನಗಳೂ ಉಲ್ಲೇಖಾರ್ಹ. ಇಲ್ಲಿನ ಪಾಶ್ವನಾಥ ಬಸದಿ ಬಹಳ ಪುರಾತನವಾದುದು. ಪಟ್ಟಣದ ದಕ್ಷಿಣ ಭಾಗದಲ್ಲಿ ಕರಿವರದರಾಜಸ್ವಾಮಿ ಬೆಟ್ಟವಿದೆ.

ದೊಡ್ಡ ಅರಸಿನಕೊಳ: ಕಂಠೀರವ ನರಸರಾಜ ಒಡೆಯರ್ (ಕ್ರಿ.ಶ 1638-59) ಅವರು ಈ ಕೊಳವನ್ನು ಕಟ್ಟಿಸಿದ್ದು, ಇದು ಬಹುಕಾಲದವರೆಗೂ ನಗರದ ಜನತೆಗೆ ಕುಡಿಯುವ ನೀರನ್ನು ಒದಗಿಸುತ್ತಿತ್ತು. ಈ ಐತಿಹಾಸಿಕ ಕೊಳ ಈಗ ಪಾಳು ಬಿದ್ದಿದೆ. ದೊಡ್ಡ ಅರಸಿನ ಕೊಳದ ಗಣಪತಿಯು ಮಹಮಾನ್ವಿತವೆಂದು ಪ್ರತೀತ ಇದೆ.

ಹರಳುಕೋಟೆ:- ನಗರದಿಂದ ಪೂವ್ಕ್ಕೆ 5 ಕಿ.ಮೀ. ದೂರದಲ್ಲಿ ಹರಳುಕೋಟೆ, ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. ಹನುಮಚ್ಚಿಂತನ ಎಂಬ ಗದ್ಯ ಕೃತಿಯೂ ಶ್ರೀ ಹನುಮತ್ ಸುಪ್ರಭಾತ ಎಂಬ ಪಠ್ಯಮಾಲಿಕೆಯೂ ಈ ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವಗಳನ್ನು ಕುರಿತು ಬಣ್ಣಿಸಿರುವ ಕೃತಿಗಳು.

ದಿವ್ಯಲಿಂಗೇಶ್ವರ:- ಪಟ್ಟಣದ ದಕ್ಷಿಣದಲ್ಲಿರುವ ಹರದನಹಳ್ಳಿಯಲ್ಲಿ ಐತಿಹಾಸಿಕವಾಗಿ ಪ್ರಮುಖವಾದ ಸ್ಥಳ, ಇಲ್ಲಿನ ದಿವ್ಯಲಿಂಗೇಶ್ವರ ದೇವಾಲಯವು ಬಹು ಪುರಾತನವಾದ್ದು. ತೋಂಟದ ಸಿದ್ದಲಿಂಗರ ಗುರುವಾದ ಗೋಸಲ ಚೆನ್ನಬಸವರು ಇದ್ದ ಗ್ರಾಮವಿದು.

ನರಸಮಂಗಲ:- ಇದು ಕೂಡ ಪುರಾತನ ಸ್ಥಳವಾಗಿದೆ. ಇಲ್ಲಿ ಜೀರ್ಣವಾದ ರಾಮೇಶ್ವರ ಗುಡಿಯಿದೆ. ಭವ್ಯವಾದ ಶಿವಲಿಂಗವಿದ್ದು ರಾಷ್ಟ್ರೀಯ ಸ್ಮಾರಕವೆಂದು ಘೋಡಿಸಲಾಗಿದೆ.

ಅವಶೇಷಗಳು:- ರಾಮಸಮುದ್ರದಲ್ಲಿ ಪುರಾತನ ಮಣಿಪುರದ್ದೆಂದು ಹೇಳಲಾದ ಅವಶೇಷಗಳಿವೆ. ಮಲೆಯೂರು ಬೆಟ್ಟದಲ್ಲಿ ಕೆಲವು ಪ್ರಾಚೀನ ಜೈನ ಅವಶೇಷಗಳಿವೆ. ಉಮ್ಮತ್ತೂರು ಗ್ರಾಮ ಪಾಳೆಯ ಪಟ್ಟಿನ ಕೇಂದ್ರವಾಗಿತ್ತು.

ಶಿಲ್ಪಕಲೆ:- ತಾಲ್ಲೂಕಿನಾದ್ಯಂತ ದ್ರಾವಿಡ, ಗಂಗ, ಹೊಯ್ಸಳ, ವಿಜಯನಗರ ಶೈಲಿಗಳ ದೇವಾಲಯಗಳು, ಇಲ್ಲಿನ ಶಿಲ್ಪಕಲೆಗಳಿಗೆ ಸಾಕ್ಷಿಯಾಗಿವೆ. ಕರ್ನಾಟಕದ ಖ್ಯಾತ ಶಿಲ್ಪಿಗಳಾದ ಸಿದ್ದಲಿಂಗಸ್ವಾಮಿ ಈ ತಾಲ್ಲೂಕಿನವರು. ಇವರು ಶಿಲ್ಪಕಲೆಯಲ್ಲಿ ಅಭಿನವ ಜಕಣಾಚಾರ್ಯರೆಂದು ಪ್ರಸಿದ್ದರಾಗಿದ್ದರು.

ಸುವರ್ಣಾವತಿ:- ಇಲ್ಲಿಯ ಮುಖ್ಯ ನದಿ ಸುವರ್ಣಾವತಿ ಈ ನದಿಯನ್ನು ಹೊನ್ನುಹೊಳೆ ಎಂದು ಕರೆಯುವುದುಂಟು, ಇದು ದಕ್ಷಿಣ ಗಡಿಯ ಆಚೆ ನೀಲಗಿರಿ ಬೆಟ್ಟ ಸಾಲಿನಲ್ಲಿ ವಿಂಚಿಂ ಎಂಬಲ್ಲಿ ಹುಟ್ಟಿ ಈಶಾನ್ಯಭಿಮುಖವಾಗಿ ಹರದಿ ರಾಮಸಮುದ್ರ ಮತ್ತು ಆಲೂರುಗಳನ್ನು ದಾಟಿ ಯಳಂದೂರಿನತ್ತ ಸಾಗುತ್ತದೆ. ಚಾಮರಾಜನಗರ ಪಟ್ಟಣಕ್ಕೆ ನೀರೋದಗಿಸುವ ಸುವರ್ಣಾವತಿಯ ಉಪನದಿ ಚಿಕ್ಕಹೊಳೆ.

ಸುವರ್ಣಾವತಿಗೆ ಅಟ್ಟುಗುಳಿಪುರದ ಬಳಿ ಕಟ್ಟೆ ಕಟ್ಟಲಾಗಿದೆ. 26 ಮೀ. ಎತ್ತರವಿರುವ ಈ ಜಲಾಶಯದ ಉದ್ದ ಸುಮಾರು 1158 ಮೀ. ಇದರ ಬಲನಾಲೆಯ ಉದ್ದ 23 ಕಿ.ಮೀ. ಎಡನಾಲೆ 6 ಕಿ.ಮೀ. 1971 ರಿಂದ ನೀರಾವರಿಗೆ ಬಳಸಿಕೊಳ್ಳಲಾಗುತ್ತಿರುವ ಇದರ ಒಟ್ಟು ಅಚ್ಚುಕಟ್ಟು 17,000 ಎಕರೆ ಇದರಲ್ಲಿ ನೇರ ಅಚ್ಚುಕಟ್ಟು 7,000 ಎಕರೆ.

ಈರೋಡ್್ಿ (ಪೆರಿಯೂರ್) ಜಿಲ್ಲೆಯಲ್ಲಿ ಹುಟ್ಟಿ ಚಾಮರಾಜನಗರ ತಾಲ್ಲೂಕಿನಲ್ಲಿ ಸುವರ್ಣಾವತಿಯನ್ನು ಸೇರುವ ಚಿಕ್ಕಹೊಳೆಗೆ ಕಟ್ಟೆಯಿಮದ ಕೆಳಕ್ಕೆ ಒಂದು ಮಧ್ಯಮ ವರ್ಗದ ಕಟ್ಟೆ ಕಟ್ಟಲಾಗಿದೆ.

ಅಂಕಿ ಅಂಶ: ಚಾಮರಾಜನಗರ ತಾಲ್ಲೂಕಿನ ವಿಸ್ತೀಣ್ 1235.9 ಚ.ಕಿ.ಮೀ. ತಾಲ್ಲೂಕಿನಲ್ಲಿ ಒಟ್ಟು 190 ಗ್ರಾಮಗಳಿವೆ. ಈ ಪೈಕಿ ಜನವಸತಿ ಇರುವ ಗ್ರಾಮಗಳ ಸಂಕ್ಯೆ 172, ಉಳಿದ 18 ಗ್ರಾಮಗಳಲ್ಲಿ ಜನವಸತಿ ಇರುವುದಿಲ್ಲ. 1991ರ ಜನಗಣತಿಯಂತೆ ಈ ತಾಲ್ಲೂಕಿನಲ್ಲಿ ವಾಸಿಸುತ್ತಿರುವ ಜನಸಂಖ್ಯೆ 3,11,321 ಜನಸಾಂದ್ರತೆ ಪ್ರತಿ ಚದುರ ಕಿ.ಮೀ.ಗೆ 253ರಷ್ಟಿದೆ. ಇಂದು ತಾಲ್ಲೂಕಿನಲ್ಲಿ ಒಟ್ಟು 39.59 ರಷ್ಟು ಅಕ್ಷರಸ್ಥರಿದ್ದಾರೆ. ಮಳೆಯ ವಾರ್ಷಿಕ ಸರಾಸರಿ 689 ಮಿ.

ಗ್ರಾಮಾಂತರ ಪ್ರದೇಶಗಳಲ್ಲಿ ನಾಡ ಹೆಂಚಿನ ಮನೆಗಳು ಹೆಚ್ಚು ಸಂಖ್ಯೆಯಲ್ಲಿವೆ. ಆರ್ಥಿಕ ಅನುಕೂಲ ಉಳ್ಳವರು ಸೀಮೆಹೆಂಚಿನ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಮಾದರಿ ಮನೆಗಳಿಗೆ. ಜಿಲ್ಲಾ ಕೇಂದ್ರವಾಗಿರುವ ಪಟ್ಟಣದಲ್ಲಿ ವಾಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮನೆಗಳಿಲ್ಲದಿರುವುದು ಶೋಚನೀಯ ಸಂಗತಿ. ಗ್ರಾಮ ಪ್ರದೇಶಗಳಲ್ಲಿ ಗುಡಿಸಲುಗಳಲ್ಲೇ ವಾಸಮಾಡುತ್ತಿರುವ ಹಲವಾರು ಕುಟುಂಬಗಳಿವೆ.

ಇಲ್ಲಿನ ಬಹುಜನ ಮಾತೃಭಾಷೆ ಕನ್ನಡ ತಮಿಳು ಭಾಷೆಯ ಪ್ರಭಾವದಿಂದ ಜನರು ಕನ್ನಡ ಮಾತಾಡುವಾಗ ಪದಗಳ ಉಚ್ಚಾರಣೆಯಲ್ಲಿ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಉರ್ದು, ಮರಾಠಿ, ಕೊಂಕಣಿ, ತೆಲಗು, ಮಲಯಾಳಂ, ಭಾಷೆಗಳಲ್ಲಿ ಮಾತನಾಡುವವರಿದ್ದಾರೆ.

ಇಲ್ಲಿ,ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿ ಇದೆ. ಸುವರ್ಣಾವತಿ ನದಿ ಪ್ರದೇಶದಲ್ಲಿ ಚೌಳು ಮಣ್ಣು ವಿಶೇಷವಾಗಿದೆ. ಕೆಲವೆಡೆ ನುರುಜು ಮಿಶ್ರಿತ ಮಣ್ಣಿನ ಭೂಮಿ ಇದೆ. ಪಶ್ಚಿಮ ಭಾಗದ ಭೂಮಿ ಹೆಚ್ಚು ಫಲವತ್ತಾದುದಲ್ಲ ಪೂರ್ವಭಾಗದ ಭೂಮಿ ಶ್ರೇಷ್ಟವಾಗಿದೆ. ತಾಲ್ಲೂಕಿನಲ್ಲಿ ಒಟ್ಟು 50 ಕೆರೆಗಳು 8,000 ಸಾವಿರಕ್ಕೂ ಹೆಚ್ಚು ನೀರಾವರಿ ಬಾವಿಗಳಿವೆ.

ಜೋಳ ಈ ತಾಲ್ಲೂಕಿನ ಮುಖ್ಯ ಬೆಳೆ, ಈಚೆಗೆ ಜೋಳದ ಬೆಳೆ ಕಡಿಮೆಯಾಗಿದೆ. ರಾಗಿ, ಹುರುಳಿ, ಕಡ್ಲೆಕಾಯಿ ಮತ್ತು ಇತರೆ ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾರೆ. ವಾಣಿಜ್ಯ ಬೆಳೆ ಹಿಪ್ಪುನೇರಳೆ ನೀರಾವರಿ ಸೌಲಭ್ಯ ಇರುವಲ್ಲಿ ಭತ್ತ ಕಬ್ಬು, ತೆಂಗು, ಅಡಿಕೆ ತೋಟಗಳಂಟು. ತಾಲ್ಲೂಕಿನಲ್ಲಿ ಕೈಗಾರಿಕೆಗಳು ಹೇಳಿಕೊಳ್ಳುವಂತಿಲ್ಲ.

ಕಲೆ: ತಾಲ್ಲೂಕು ಜನಪದ ಕಲೆಗಳ ಕಣಜವಾಗಿದೆ. ಗೊರವರ ಕುಣಿತ, ನಂದಿಕೋಲು, ಲಂಗದ ಬೀರರುಕುಣಿತ, ಬೀಸುಕಂಸಾಳೆ, ಕೋಲಾಟ, ಗಾರುಡಿಕುಣಿತ, ಈರಮಕ್ಕಳ ಕುಣಿತ ರಾಮಸಮುದ್ರ ಗೊರವರ ಕುಣಿತಗಳಲ್ಲಿ ಹೆಸರುವಾಸಿಯಾಗಿದೆ.

ಸಾಹಿತ್ಯ: ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಈ ತಾಲ್ಲೂಕು ನೀಡಿದ ಕೊಡುಗೆ ಮಹತ್ತರವಾದದ್ದು. ಪ್ರಸಿದ್ದ ವಚನಕಾರರಾದ ತೋಂಟದ ಸಿದ್ದಲಿಂಗೇಶ್ವರ (ಸು. 1470) ಸ್ವಾತಂತ್ರ ಸಿದ್ದಲಿಂಗೇಶ್ವರ (ಸು. 1480) ಇವರಿಬ್ಬರ ಜನ್ಮ ಸ್ಥಳ ಹರದನಹಳ್ಳಿ. ಇದೇ ಹಳ್ಳಿಯ ಹೆಮ್ಮೆಯ ಕವಿ ನಂಜಣಾಚಾಯ್ೊ (ಸು. 1650) ಪ್ರಸಿದ್ದ ಜೈನಕವಿ ದೇವಚಂದ್ರ (1770-1841) ಮಲೆಯೂರಿನವರು.

ಪ್ರಸಿದ್ದ ಲೇಖಕರಾದ ಡಾ|| ಪ್ರಭುಶಂಕರ, ಡಾ|| ಸಿ.ಕ.ರೇಣುಕಾರ್ಯ ಇದೇ ಊರಿನವರು. ಮನೋವಿಜ್ಙಾನಿ ಬಸವಣ್ಣ ಮಲ್ಲಪ್ಪ (1933) ಮಂಗಲದವರು, ತತ್ವಶಾಸ್ತ್ರ ಪ್ರಾಧ್ಯಪಕರಾದ ನಂಜಪ್ಪ, ರೇಚಣ್ಣಗುರ್ಕಾರ್ (1934) ಅವರ ಊರು ಹೊಮ್ಮ, ಬ್ಯಾಡಮೂಡ್ಲು ಗ್ರಾಮದ ಡಾ|| ಪಿ.ಎಸ್. ರಾಮಾನುಜಂ, (1941) ಮಲೆಯೂರು ಗುರುಸ್ವಾಮಿ (1947) ಮಲೆಯೂರು ಗುರುಸ್ವಾವಿ ಜಿಲ್ಲೆಯ ಮೊದಲ ಸಾಹಿತ್ಯ ಪರಿಷತ್್ಣ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಬಿ.ಎ. ಮಧು (1959) ಕೆಲ್ಲಂಬಳ್ಳಿ ಬಸವನಪುರ, ದಲಿತ ಸಾಹಿತಿ ಡಾ|| ದೇವಮ್ಮ (1951) ಹರವೆಯವರು, ಕೃಷಿವಿಜ್ಙಾನಿ ಡಾ|| ಎಂ. ಮಹದೇವಪ್ಪ, ಮಾದಪುರದವರು. ಹೆಸರಾಂತ ಸಸ್ಯತಳಿ ವಿಜ್ಙಾನಿ ಡಾ|| ರಂಗಸ್ವಾಮಿ (1938) ದೊಡ್ಡರಾಯಪೇಟೆಯವರು.

ಚಿತ್ರರಂಗ: ಕನ್ನಡ ಚಿತ್ರರಂಗದಲ್ಲಿ ಹೆಸರು ವಾಸಿಯಾದವರು ತಾಲ್ಲೋಕಿನಲ್ಲಿದ್ದಾರೆ. ಚಾ.ನಗರ ರಾಮನಾಥ್ ಋಗ್ವೇದಿ ಹರದನಹಳ್ಳಿ ಹ.ಸೂ. ರಾಜಶೇಖರ, ಅಮ್ಮನಪುರದ ಎಂ.ಎಸ್. ಸ್ವಾಮಿ, ಬಿ.ಎ. ಮಧು ಕೆಲ್ಲಂಬಳ್ಳಿ ಬಸವನಪುರ, ದಿವಂಗತ ಸುಂದಕೃಷ್ಣ ಅರಸು ಸುರೇಶ್್ವ ಅರಸು (ಉತ್ತವಳ್ಳಿ) ಬಿ. ಮಲ್ಲಿಕ್ ಚಾಮರಾಜನಗರರವರು.

ರಂಗಭೂಮಿ: ದಿ. ಸಿ.ವಿ. ರಾಮಾಶಾಸ್ತ್ರಿ ನಾ.ಜಿ. ನರಸಿಂಹಮೂರ್ತಿ, ಪಂಕಜ ರವಿಶಂಕರ್, ನ. ನರಹರಿ, ತಾಲ್ಲೋಕಿನವರಾಗಿದ್ದು ವೃತ್ತಿರಂಗಭೂಮಿಯಲ್ಲಿ ರಾಜ್ಯಾದ್ಯಂತ ಹೆಸರುಗಳಿಸಿದವರು. 1973 ರಲ್ಲಿ ಸಂಘಟನೆಗೊಂಡ ಶಾಂತಲಾ ಹವ್ಯಾಸಿ ಕಲಾವಿದರು ಹಾಗೂ 1991 ರಲ್ಲಿ ರಂಗ ಚಟುವಟಿಕೆಗಳಿಗೆ ಹುಟ್ಟಿಕೊಂಡ ರಂಗತರಂಗ ಸಂಸ್ಥೆಗಳು ಹೊಸ ಹೊಸ ಆಯಾಮದ ನಾಡಕ ಪ್ರಯೋಗಿಸಿ ಜನಮನ ಗೆಲ್ಲುತ್ತಿದ್ದಾರೆ. ಈ ವಷ್ರ ರಾಜ್ಯ ನಾಟಕ ಅಕಾಡೆಮಿ ಸದಸ್ಯರುಗಳಾಗಿ ಸಿ. ಎಂ. ನರಸಿಂಹಮೂರ್ತಿ ಹಾಗೂ ಪಂಕಜ ರವಿಶಂಕರ್ ನೇಮಕಗೊಂಡಿದ್ದಾರೆ.

ಗಮಕಿಗಳ ತೌರೂರು: ರಾಮಸಮುದ್ರದ ಗಮಕ ವಿದ್ವಾನ್ ಕೆ. ವೆಂಕಟಸುಬ್ಬಯ್ಯ, ಹೆಚ್. ರಾಮದಾಸ್್ಈ ದಿ|| ಕೆ.ಎಸ್. ಸುಬ್ರಹ್ಮಣ್ಯಯ್ಯ, ಆರ್.ಕೆ. ರಾಜಗೋಪಾಲ್, ನಂ. ಅಶ್ವತ್ಥನಾರಾಯಣ, ಕೆ. ಸುಬ್ರಹ್ಮಣ್ಯಂ, ಕುದೇರಿನ ಕಮಲಾಕ್ಷಮ್ಮ, ಅಮಚವಾಡಿ ಎ.ಎಸ್. ವೆಂಕಟದಾಸು ಮುಂತಾದವರು ಗಮಕ ಕಲೆಯಿಂದ ನಾಡಿನಾದ್ಯಂತ ಪ್ರಸಿದ್ದಿಗಳಿಸಿದ್ದಾರೆ.





ಹಕ್ಕುತ್ಯಾಗ: ವೆಬ್ಸೈಟ್ನ ಪರಿವಿಡಿಯನ್ನು ಜಿಲ್ಲಾ ಆಡಳಿತವು ಒದಗಿಸಿದೆ .
ಯಾವುದಕ್ಕಾದರೂ ಸಲಹೆ ಮೇಲ್ karcha@hub2.nic.in. ಅತ್ಯುತ್ತಮ ವೀಕ್ಷಣೆ 800X600 ಪಿಕ್ಸೆಲ್ಗಳಲ್ಲ.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್, ಚಾಮರಾಜನಗರ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ