ಚಾಮರಾಜನಗರ ಜಿಲ್ಲೆಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ನಿರ್ಧೇಶನಾಲಯ ಬೆಂಗಳೂರು ರವರಿಂದ .ಶಾಶ್ವತ ಆಧಾರ್ ನೋಂದಣಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ನಾಡಕಛೇರಿಗಳಲ್ಲೂ ಸ್ಥಾಪಿಸಲಾಗಿದೆ.

1.ಚಾಮರಾಜನಗರ ತಾಲ್ಲೋಕು ಕಛೇರಿ

2.ಸಂತೇಮರಳ್ಳಿ ನಾಡ ಕಛೇರಿ

3.ಚಂದಕವಾಡಿ ನಾಡ ಕಛೇರಿ

4.ಹರದನಹಳ್ಳಿ ನಾಡ ಕಛೇರಿ

5.ಹರವೆ ನಾಡ ಕಛೇರಿ

6.ಗುಂಡ್ಲುಪೇಟೆ ತಾಲ್ಲೋಕು ಕಛೇರಿ

7.ಹಂಗಳ ನಾಡ ಕಛೇರಿ

8.ಬೇಗೂರು ನಾಡ ಕಛೇರಿ

9.ತೆರಕನಾಂಬಿ ನಾಡ ಕಛೇರಿ

10.ಯಳಂದೂರು ನಾಡ ಕಛೇರಿ

11.ಆಗರ ನಾಡ ಕಛೇರಿ

12.ಕೋಳ್ಳೆಗಾಲ ತಾಲ್ಲೋಕು ಕಛೇರಿ

13.ಪಾಳ್ಯ ನಾಡ ಕಛೇರಿ

14.ಹನೂರು ತಾಲ್ಲೋಕು ಕಛೇರಿ

15.ರಾಮಾಪುರ ನಾಡ ಕಛೇರಿ

 16.ಲೋಕ್ಕನಹಳ್ಳಿ ನಾಡ ಕಛೇರಿ

          ಈ ಮೇಲ್ಕಂಡ ಎಲ್ಲಾ ನಾಡಕಛೇರಿ (ಅಟಲ್ ಜೀ ಜನಸ್ನೇಹಿ ಕೇಂದ್ರ)ಗಳಲ್ಲಿ ಆಧಾರ್ ನೋಂದಣಿ ಮಾಡಲಾಗುತ್ತಿದೆ . ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೋಳ್ಳಬೇಕೆಂದು ಹಾಗೂ ಆಧಾರ್ ನೋಂದಣಿಗೆ ಸಂಬಂಧಿಸಿಂತೆ ವಿಳಾಸ ತಿದ್ದಪಡಿ , ಜನ್ಮ ದಿನಾಂಕದ ನಮೂದು , ಇ ಆಧಾರ್ ಸೇವೆಗಳನ್ನು ಪಡೆಯಬಹುದಾಗಿದೆ .

       ಚಾಮರಾಜನಗರ ಜಿಲ್ಲೆಯಲ್ಲಿ ಇ ಆಡಳಿತ ಕೇಂದ್ರ ಬೆಂಗಳೂರು ರವರಿಂದ ಮೊಬೈಲ್ ಆಧಾರ್ ನೋಂದಣಿ ಸೇವೆಯನ್ನು ಪ್ರಾರಂಭಿಸಲಾಗಿದ್ದು . ಶಾಲಾ ಮಕ್ಕಳು , ನರೇಗಾ ಯೋಜನೆಯ ಫಲಾನುಭವಿಗಳು , ವೃದ್ದಾಶ್ರಮಗಳು , ಬಾಲಮಂದಿರಗಳು , ಕಾರಗೃಹಗಳು , ಅರಣ್ಯ ಪ್ರದೇಶದಲ್ಲಿರುವ ಗಿರಿಜನ ಹಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ನಿವಾಸಿಗಳ ಮನೆ ಬಾಗಿಲಿಗೆ ಆಧಾರ್ ನೋಂದಣಿ ಸೇವೆ ನೀಡಲು ಇ-ಆಡಳಿತ ಕೇಂದ್ರ ಬೆಂಗಳೂರು ಮತ್ತು ಜಿಲ್ಲಾಡಳಿತ ಚಾಮರಾಜನಗರ ಮುಂದಾಗಿದೆ . ಸಧ್ಯ ದಿನಾಂಕ 1/7/2015 ರಿಂದ ಮೊಬೈಲ್ ಸೇವೆ ಆರಂಭಿಸಿದ್ದು 7/9/2015 ಕ್ಕೆ 5000 ಕ್ಕೂ ಮೇಲ್ಪಟ್ಟು ನಿವಾಸಿಗಳು ಇದರ ಪ್ರಯೋಜನ ಪಡೆದಿದ್ದಾರೆ . ತಮ್ಮ ಊರಿನಲ್ಲಿ 50 ರಿಂದ 100 ನಿವಾಸಿಗಳಿದ್ದು ಆಧಾರ್ ಸಂಖ್ಯೆ ಪಡೆಯದಿದ್ದಲ್ಲಿ ಈ ಕೂಡಲೇ ಜಿಲ್ಲಾಧಿಕಾರಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ .